ಡಿ.ಎನ್.ನಗರ್,ಮುಂಬಯಿ ಮಹಾನಗರದ ಪಶ್ಚಿಮ ರೈಲ್ವೆ ಭಾಗದಲ್ಲಿರುವ ಅಂಧೇರಿ ಉಪನಗರದ ಒಂದು ಭಾಗವಾಗಿದೆ-ಇದು,ಮಹಾರಾಷ್ಟ್ರದ ಮುಂಬಯಿನಗರದ ಒಂದು ಅತಿದೊಡ್ಡ ಉಪನಗರಗಳಲ್ಲೊಂದಾಗಿದೆ. ದಾದಾ ಭಾಯಿ ನವರೋಜಿಯವರ ಹೆಸರಿನಲ್ಲಿ 'ಲೋಖಂಡ್ ವಾಲ ಕಾಂಪ್ಲೆಕ್ಸ್' ನಲ್ಲಿದೆ. ಸೆವೆನ್ ಬಂಗಲೋಸ್, ಮತ್ತು ಜುಹು ವಿಲೆಪಾರ್ಲೆ ಡೆವೆಲಪ್ಮೆಂಟ್ ಸ್ಕೀಮ್ ()ವಲಯದ ಇದಕ್ಕೆ ತೀರ ಸಮೀಪ. ೧೯೮೦ ರ ನಂತರ ಡಿ.ಎನ್.ನಗರ್ ವಿಶಾಲವಾಗ ತೊಡಗಿತು. ಡಿಎನ್ ನಗರದ ನಿವಾಸಿಗಳು ಹೆಚ್ಚಾಗಿ ಮದ್ಯವರ್ಗದ ಜನ. ಕೆಲವರು ಹೆಚ್ಚು ವರಮಾನದಾರರೂ ವಾಸಿಸುತ್ತಿದ್ದಾರೆ. ಡಿ.ಎನ್.ನಗರದ ಕೆಲವು ಪ್ರಮುಖ ವಿದ್ಯಾಸಂಸ್ಥೆಗಳು,ಮತ್ತಿತರ ಸಾರ್ವಜನಿಕ ಸಂಸ್ಥೆಗಳು : ಪ್ರಗತಿವಿದ್ಯಾಲಯ ಮಂದಿರ್, ಭವನ್ಸ್ ಕಾಲೇಜ್, ಭವನ್ಸ್ ಎ.ಎಚ್. ಡಿಯ ಹೈಸ್ಕೂಲ್, ಭವನ್ಸ್ ಸರ್ದಾರ್ ಪಟೇಲ್ ಕಾಲೇಜ್ ಆಫ್ ಇಂಜಿನಿಯರಿಂಗ್, ಭವನ್ಸ.ಎಸ್.ಪಿ.ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಎಸ್.ಸಿ.ಡಿ ಬರ್ಫಿವಾಲ ಹೈಸ್ಕೂಲ್ ಅಂಡ್ ವಾಲಿಯ ಕಾಲೇಜ್, == ಮೆಟ್ರೋ ರಲ್ವೆಮಾರ್ಗ == ಮೆಟ್ರೋ ರಲ್ವೆ ಸಂಚಾರ ಶುರುವಾದ ಮೇಲೆ ಡಿ.ಎನ್.ನಗರ ಘಾಟ್ಕೋಪರ್-ಅಂಧೇರಿ ಮೆಟ್ರೊ ದಾರಿಯಲ್ಲಿ ಸ್ವಲ್ಪ ಎತ್ತರದಲ್ಲಿರುವ ಒಂದು ಪ್ರಮುಖ ನಿಲ್ದಾಣವಾಗಿದೆ. ಅದೇಹೆಸರಿನ ಜಾಗ, ಇಂಡಿಯನ್ ಆಯಿಲ್ಸ್ ಕಾಲೋನಿಯ ಜಂಕ್ಷನ್ಸ್ ನಲ್ಲಿದೆ. == ಉಲ್ಲೇಖಗಳು ==